ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ನವೆಂಬರ್ 4, 2009

ನಿನ್ನ ನೆನಪು

ಈ ದಿನ ನಿನ್ನ ನೆನಪಿನ ದಿನವಾಗಿದೆ
ಮಾತಿಲ್ಲದ ಮೌನದ ದಿನವಾಗಿದೆ
ಶಾಂತಿಯ ಸುಖವಾದ ದಿನವಾಗಿದೆ
ಈ ದಿನ ನಿನ್ನ ನೆನಪಿನ ಮೌನದ ಸುಖವನ್ನು ಹೇಳುವೆ
ಕೇಳು..
ನಿನ್ನ ನೆನಪು ಬಂದಾಗ
ಆ ಮೌನ ನನ್ನ ಆವರಿಸಿತು
ಅದೇ ಮೌನವು ನಿನ್ನ ಪ್ರೀತಿಯನ್ನು ಹೇಳಿತು
ಆ ಪ್ರೀತಿ ನಿನ್ನ
ಭಾವನೆಗಳನ್ನು ನನ್ನಲ್ಲಿ ಮೂಡಿಸಿತು
ಅದೇ ಭಾವನೆಗಳು ನನ್ನ ಮನಸ್ಸು ತುಂಬಿತು
ನನ್ನ ಮನಸ್ಸು ನಿನ್ನ ಮನಸ್ಸಿನ
ಪ್ರೀತಿಯ ಮಾತನ್ನು ಮುದ್ದಾಗಿ ಕೇಳಿತು
ನಿನ್ನ ಮುದ್ದಾದ ಶಬ್ದಗಳು
ನನ್ನ ಮನಸ್ಸಿನ ಮೌನಕ್ಕೆ ಕಾರಣವಾಯಿತು
ಮತ್ತು ನನಗೆ ಶಾಂತಿಯ ಸುಖವನ್ನು ನೀಡಿತು
ಹೀಗೆ ಈ ದಿನ ನಿನ್ನ ನೆನಪಿನ ಮೌನದ ಸುಖವನ್ನು ಹೇಳಿತು ..

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ