ನನ್ನ ಕನಸಿನ ಮನಸ್ಸಿನ ಗೆಳೆಯ ನೀನು
ನೀನಿಲ್ಲದೆ ಬದುಕಲಾರೆನು ನಾನು ..
ಮುಗ್ಧ ಮನಸ್ಸಿನ ಹೃದಯ ನಿನ್ನದು
ಕಾಡಿಸಿ ಪ್ರೀತಿ ಮಾಡುವ ಮನಸ್ಸು ನನ್ನದ್ದು ..
ಜೋಕೆಯಾಗಿ ನಗಿಸುವ ಮಾತು ನಿನ್ನದು
ನಗುವಲ್ಲಿ ಅಳಿಸುವ ವಾಕ್ಯ ನನ್ನದು..
ನನಗಾಗಿ ಉಸಿರಾಡುವ ಉಸಿರು ನಿನ್ನದು
ನಿನ್ನುಸಿರೆ ನನ್ನುಸಿರು ಎನ್ನುವ ಜೀವ ನನ್ನದು..
ಮುದ್ದು ಮಾಡಿ ಹೇಳುವ ಸ್ವಭಾವ ನಿನ್ನದು
ಸಿಟ್ಟಿನಿಂದ ತಿಳಿಸುವ ಹಟ ನನ್ನದು ..
ಸುಖವನ್ನೇ ಬಯಸಿರುವ ಮನಸ್ಸು ನಿನ್ನದು
ದು:ಖವನ್ನೇ ನೀಡಿರುವ ಕೆಟ್ಟ ಮನಸ್ಸು ನನ್ನದು ..
ಕ್ಷಮಿಸುವ ದೊಡ್ಡ ಹ್ರದಯ ನಿನ್ನದು
ತಪ್ಪನ್ನೇ ಮಾಡುವ ಚಿಕ್ಕ ಹ್ರದಯ ನನ್ನದು..
ನನ್ನ ಪ್ರೀತಿಯ ಜೀವ :)
ಒಬ್ಬ ಪ್ರಿಯತಮೆ ತನ್ನ ಕನಸಿನ ರಾಜನನ್ನು ಹೊಗಳುತ್ತ ಪ್ರೀತಿಸುವ ಬಗೆಯನ್ನು ಈ ಕವನದಲ್ಲಿ ತುಂಬಾ ಸೊಗಸಾಗಿ ವರ್ಣಿಸಲಾಗಿದೆ. ಈ ತುಂಟ ಪ್ರೀತಿಯನ್ನು ಪಡೆಯುವ ಆ ಪ್ರಿಯಕರ ಇಸ್ ರಿಯಲಿ ಗ್ರೇಟ್.
ಪ್ರತ್ಯುತ್ತರಅಳಿಸಿಧನ್ಯವಾದ
ಪ್ರತ್ಯುತ್ತರಅಳಿಸಿ