ಏನು ಈ ಬಂಧನ ತಿಳಿಯಲಾಗಿದೆ ನನಗೆ
ಮಾಯಾಲೋಕದಲ್ಲಿ ಸಿಲುಕಿದ ಹಾಗೆ
ಪ್ರತಿ ಬಡಿತವು ನಿನ್ನ ಹೆಸರನ್ನೇ ಹೇಳುತಿದೆ
ಪ್ರತಿ ಉಸಿರು ನಿನ್ನ ನೆನಪೇ ತರುತಿದೆ
ನೆನಪು ಬಂದಾಗ ಏನೋ ಒಂಥರಾ ಸುಖ !
ಆ ಸುಖದಲ್ಲಿ ಸ್ವರ್ಗ ಕಾಣುವ ಹಾಗೇ..
ನನ್ನನ್ನು ನೀನು ಅಪ್ಪಿಕೊಂಡು
ಪ್ರೀತಿಯ ಮಾತು ಹೇಳಿದ ಹಾಗೇ..
ಎಷ್ಟು ಸುಂದರ ನಿನ್ನ ಪ್ರೀತಿ
ಮೌನದಲ್ಲಿಯೇ ಪ್ರೀತಿಸುವ ಹಾಗೇ..
ಮುದ್ದು ಮಾಡಿದೆ ನೀನು
ನಾನು ಚಿಕ್ಕ ಮಗು ಇರುವ ಹಾಗೇ..
ನಿಜವಾಗಲೂ ನೀನೆಂದರೆ ನನಗೆ
ಪ್ರೀತಿಯ ಚಿಹ್ನೆ ಇದ್ದ ಹಾಗೇ...
ನನ್ನ ಪ್ರೀತಿಯ ಜೀವ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ