ಸ್ನೇಹವೆಂದರೆ ಹೀಗೆ, ಪ್ರೀತಿ ಇಲ್ಲದೆ ಹೇಗೆ?
ಕೋಪ ಜಗಳ ಉಂಟು
ಸಿಹಿ ಮಾತು ಉಂಟು..
ಮನವೆಂಬ ಪದದಲ್ಲಿ ಅಡಗಿರುವ ಸ್ನೇಹವಿದು..
ಭಾವನೆಗಳ ದಾರಿಯಲ್ಲಿ
ಹೆಜ್ಜೆ ಇಡುವ ಪ್ರೀತಿ ಇದು..
ಮನಸ್ಸು ಎರಡೂ ಸೇರಿದಾಗ
ಸುಖ- ದುಃಖ ಹಂಚಿದಾಗ..
ಪ್ರೀತಿ ಜಗಳ ಇದ್ದಾಗ ನೆನಪಾಗುವ ಪದವೊಂದು
ಅದೆಯೇ ಸ್ನೇಹವೆಂದು..
ಕಣ್ಣು ರೆಪ್ಪೆಯ ಹಾಗೆ
ರಕ್ಷಣೆ ಇದು ಮಾಡುವುದು
ಬೆಲ್ಲ ಸಕ್ಕರೆ ಹಾಗೆ
ಸಿಹಿತನವೇ ನೀಡುವುದು
ಇದಕ್ಕೆ ಇಂದು ನಾವು ಸ್ನೇಹವೆಂದು ಹೇಳುವುದು.
ನನ್ನ ಪ್ರೀತಿಯ ಜೀವ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ