ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ಅಕ್ಟೋಬರ್ 27, 2009

ಸ್ರಷ್ಟಿ


ಆಕಾಶ ತಿಳಿಯಾಗಿದೆ ಹ್ರದಯ್ದಲ್ಲಿರುವ ಪ್ರೀತಿಯ ಹಾಗೆ, ಮೋಡ ಕವಿದಿದೆ ಸ್ನೇಹ ಚಿಗುರಿದ ಹಾಗೆ, ತಂಗಾಳಿ ಸೂಸಿದೆ ಮನಸ್ಸು ಖುಷಿಯಿಂದ ತಂಪಾದ ಹಾಗೆ,ಹಕ್ಕಿಗಳು ನಲಿದಾಡುತಿದೆಮನದಾಸೆಯೂ ಹೊರ ಹೊಮ್ಮುವ ಹಾಗೆ ...

ಈ ಸ್ರಷ್ಟಿ ಎಷ್ಟು ಚೆನ್ನ ಎಂದು ಪ್ರೀತಿಯಿಂದ ಹೇಳುವ ಹಾಗೆ ಹ್ರದಯ ಮಿಡಿಯುತಿದೆ.ಈ ಹ್ರದಯ ಮಿಡಿಯುವುದನ್ನು ನೋಡಿ ಸ್ರಷ್ಟಿ ನಗುತಿದೆ.ಕಣ್ಣು ರೆಪ್ಪೆಗಳು ಚುಂಬನ ನೀಡಿ ಕ್ಷಣದಲ್ಲಿ ಸುಖವನ್ನು ಕಾಣುತಿದೆ.. ಎದೆಯ ಪ್ರತಿ ಬಡಿತವು ಒಂದೊಂದು ಮಳೆ ಹನಿಯ ಹಾಗೇ ಭಾವನೆಗಳನ್ನು ಮೂಡಿಸುತ್ತದೆ. ನನ್ನುಸಿರು ಹಸಿರಾಗಲಿ ಎಂದ ಹಾಗೇ ಒಳ್ಳೆಯ ಸುಹಾಸನೆ ಬೀರುತಿದೆ.. ಒಂದೊಂದು ಉಸಿರಿನಲ್ಲಿ ಪ್ರೀತಿಯ ಮಾತು ಕೇಳುತಿದೆ.ಪ್ರೀತಿಯು ಬಂದಾಗ ಸಂಗಾತಿಯ ನೆನಪು ಬರುತಿದೆ.ಸಂಗಾತಿಯ ನೆನಪಾದಾಗ ಸ್ರಷ್ಟಿಯಲ್ಲಿಯೇ ಸ್ವರ್ಗವು ಕಾಣುತಿದೆ..
ಎಷ್ಟು ಸುಂದರ ಈ ಜೀವನ, ಈ ಸ್ರಷ್ಟಿ, ಈ ಸ್ನೇಹ, ಈ ಪ್ರೀತಿ, ಈ ಮನಸ್ಸು ಎಂದು ತುಟಿಗಳು ತೀವಗೊಲ್ಲುತ್ತಿವೆ.ನಿಜವಾದ ಮನಸ್ಸಿನಿಂದ ಜೀವನವನ್ನು,, ಸ್ನೇಹದಿದಂದ ಪ್ರೀತಿಯಾಗಿ ನೋಡಿದರೆ ಈ ಸ್ರಷ್ಟಿಯಲ್ಲಿ ಸ್ವರ್ಗ ಕಾಣಿಸುತ್ತದೆ...
ನನ್ನ ಪ್ರೀತಿಯ ಜೀವ :)

3 ಕಾಮೆಂಟ್‌ಗಳು: