ಓ ನನ್ನ ಗೆಳೆಯ .. ಪ್ರೀತಿಯ ಗೆಳೆಯ..
ನನ್ನನ್ನು ನಂಬಿಕೆಯಿಂದ ಕಾಣುವ
ಸುಖಿಯಾಗಿರು ಎಂದು ಹೇಳುವ
ಪ್ರೀತಿಯ ಮುಗುಳ್ನಗೆಯಿಂದ ನೋಡುವ
ನನ್ನ ನೆಳುಮೆಯ ಗೆಳೆಯ...
ನಿನ್ನ ಕೋಮಲವಾದ ಮಾತು
ನನ್ನ ಮನಸ್ಸು ಮುಟ್ಟಿದೆ
ನೀನು ಒಳ್ಳೆಯ ಗೆಳೆಯ
ಎಂದು ಹೇಳಿ ನಕ್ಕಿದೆ...
ನಾನು ಕಷ್ಟದಲ್ಲಿರುವಾಗ
ಕೈ ಹಿಡಿದ ಗೆಳೆಯ ನೀನು
ನಾನು ಏನು ಎಂದು
ಅರ್ಥಿಸಿಕೊಂಡಿರುವೆ ನೀನು...
ನಿನ್ನ ಸುಖವನ್ನು ಮತ್ತು ಸ್ನೇಹವನ್ನು
ಬಯಸುವ ಈ ಗೆಳತಿ
ಸದಾಸುಖಿಯಾಗಿರು ಎಂದು
ಆ ದೇವರಲ್ಲಿ ಪ್ರಾರ್ಥಿಸುವಳು ....
ನನ್ನ ಪ್ರೀತಿಯ ಜೀವ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ