ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ಅಕ್ಟೋಬರ್ 27, 2009

ಅಮ್ಮ...


ಅಮ್ಮ ನನ್ನ ಮುದ್ದಿನ ಅಮ್ಮ

ಎಷ್ಟು ಮಮತೆಯ ನನ್ನ ಅಮ್ಮ

ತಪ್ಪಾದರೆ ಹೊಡೆಯುವಳು

ಇಲ್ಲಾದರೆ ಯಾವಗಲೂ ಪ್ರೀತಿ ಮಾಡುವಳು

ನಿಧಾನ ಬಂದು ಮುತ್ತು ಕೊಡುವಳು

ನನ್ನ ಮುದ್ದಿನ ಕಂಡ ಎಂದು ನಗುತ ಹೇಳುವಳು

ನಾನು ನಕ್ಕರೆ ಅವಳು ನಗುವಳು

ನಾನು ಬಿದ್ದರೆ ಅವಳೇ ಹೆಚ್ಚು ಅಳುವಳು

ಕಾಳಜಿ ನನ್ನ ಅಮ್ಮ ಮಾಡುವಳು

ಸಂಸ್ಕಾರ ನನಗೆ ಅವಳೇ ಕೊಡುವಳು

ಚಿಕ್ಕವರ ತರಹ ನನ್ನ ಜೊತೆ ಆಟವಾದುವಳು

ಆದುವಾಗಲೇ ಅಭ್ಯಾಸ್ ಕೂಡ ಹೇಳುವಳು

ಮಾಡಲಿಲ್ಲಂದರೆಕೊಪ ಮಾಡುವಳು

ಆದರೆ ಕೊನೆಗೆ ಅವಳೇ ಅಳುವಳು

ಮತ್ತೆ ನಿಧಾನವಾಗಿ ನನ್ನನ್ನು ಅಪ್ಪಿಕೊಳ್ಳುವಳು

ಮತ್ತು ಮುಗುಳ್ನಗೆಯನ್ನು ನೀಡುವಳು

ಅಮ್ಮ ನನ್ನ ಪ್ರೀತಿಯ ಅಮ್ಮ

ಎಷ್ಟು ಮುದ್ದಾದ ನನ್ನ ಅಮ್ಮ....
ನನ್ನ ಪ್ರೀತಿಯ ಜೀವ :)

1 ಕಾಮೆಂಟ್‌: