ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಅಕ್ಟೋಬರ್ 30, 2009

ನಿನ್ನ ಪ್ರೀತಿ ಹೀಗಿರಲಿ


ನಗುವ ಮುಖವು ನಿಮ್ಮದಿರಲಿ

ನಿಮ್ಮ ದು:ಖದ ಗೆಳತಿ ನಾನಿರಲಿ

ನನಗೆ ತಿಳಿದಿದೆ ನಿಮ್ಮ ಮನಸ್ಸು

ಹೀಗಾಗಿ ಹೇಳುವೆ ನನ್ನ ಕನಸು .

-ಮೌನವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ಮೌನ ನಿಮ್ಮ

ಮನಸ್ಸು ನೋವಿಸದಿರಲಿ.

-ಕೋಪವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ಕೋಪ ನಿಮ್ಮ

ಪ್ರೀತಿಯನ್ನು ಕಡಿಮೆ ಮಾಡದಿರಲಿ.

-ಹುಡುಗಾಟವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ಹುಡುಗಾಟ ನಿಮ್ಮ

ಜೀವನದ ಜೊತೆ ಆಟವಾಡದಿರಲಿ

-ದು:ಖವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ದು:ಖ ನಿಮ್ಮ

ಜೀವನದಲ್ಲಿ ನಿರಾಸೆಯನ್ನು ತರದಿರಲಿ

-ನಗುವು ನಿಮ್ಮ ಪ್ರೀತಿಯಲ್ಲಿರಲಿ

ಆದರೆ ಆ ನಗುವು ನಿಮ್ಮನ್ನು

ಪ್ರತಿ ಕ್ಷಣವೂ ಸುಖವಾಗಿರಲಿ

-ಕನಸು ನಿಮ್ಮ ಪ್ರೀತಿಯಲ್ಲಿರಲಿ

ನನ್ನ ಕನಸು ನಿಮ್ಮ ಮನಸ್ಸಿನಲ್ಲಿರಲಿ

ಈ ಪ್ರೀತಿಯ ಕನಸ್ಸನ್ನು ನೀವು ಮರೆಯದಿರಿ

ಹೀಗಿರುವ ನನ್ನ ಕನಸ್ಸನ್ನು ನೀವು ನಿಜ ಮಾಡಿರಿ .


ನನ್ನ ಪ್ರೀತಿಯ ಜೀವ :)




1 ಕಾಮೆಂಟ್‌: