ಅಮಾವಾಸ್ಯೆಯ ರಾತ್ರಿಯಲಿ
ಬೆಳದಿಂಗಳು ಕಾಣುವುದೇ ?
ಬಳ್ಳಿಗೆ ಮೊಗ್ಗಾಗದೆ
ಹೂವು ಬಿಡುವುದೇ ?
ಸುಂದರ ಮಳೆಯ ಹನಿಯನ್ನು
ಬೊಗಸಿನಲ್ಲಿಡಲು ಸಾಧ್ಯವೇ ?
ಬೀಸುವ ಗಾಳಿಗೆ
ಬೇಡವೆಂದರೆ ನಿಲ್ಲುವುದೇ?
ಸೂರ್ಯನ ಕಿರಣವನ್ನು
ಸ್ಪರ್ಶಿಸಲು ಆಗುವುದೇ ?
ಕೇಳುವ ಪ್ರಶ್ನೆಗಳಿಗೆಲ್ಲ
ದೇವರು ಉತ್ತರಿಸುವನೆ ?
ಕನಸೊಡೆದು ಚೂರಾದಾಗ
ಹೃದಯ ಕಿತ್ತೆಸೆಯುವುದೇ ?
ಪ್ರಶ್ನೆಗೊಂದು ಉತ್ತರ
ಉತ್ತರಗಳಿಗೆ ಪ್ರಶ್ನೆ ಇದೆಯೇ ?
ಭೂಮಿ ಆಗಸ
ಎಂದಾದರೂ ಒಂದಾಗುವುದೇ ?
ee prashanigaLu tumba chennagive
ಪ್ರತ್ಯುತ್ತರಅಳಿಸಿಹ್ಹ.. ಪ್ರಸ್ನೆಗಳು ಚೆನ್ನಾಗಿರುತ್ತವೆ..
ಪ್ರತ್ಯುತ್ತರಅಳಿಸಿಆದರೆ ಉತ್ತರಗಳು ಬಹಳ ಕಠೀಣವಾಗಿರುತ್ತವೆ..
ಅಲ್ವಾ !!