ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಏಪ್ರಿಲ್ 23, 2011

ಅವನು ಯಾರು ?



ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು 

ನೆನಪಿನ ನೆಪವಾಗಿ ಬರುವವನು 
ಮಾತಿನಲಿ ಮಾನವ ಗೆದ್ದವನು 
ಸ್ಪರ್ಶದಲಿ ರಂಗೋಲಿ ಬಿಡಿಸಿದವನು 
ಪ್ರೀತಿಸಿ ಹೃದಯ ಕದ್ದವನು
ಅವನು ಯಾರು ?


ದು:ಖದಲಿ ರೆಪ್ಪೆಯಾಗಿ ನೆನೆದವನು 
ಕತ್ತಲಲಿ ಬೆಳಕಾಗಿ ಬಂದವನು 
ಚಿಂತೆಯಲಿ ನಿದ್ದೆಯಾಗಿ ಮಲಗಿಸಿದವನು 
ಭಾವನೆಗಳ ಗೋಡೆಗೆ ಬಣ್ಣವಾದವನು
ಅವನು ಯಾರು ?


ಮೌನದಲಿ ನೆನಪಾಗಿ ನಗಿಸಿದವನು 
ರಾತ್ರಿಯಲಿ ಕನಸಾಗಿ ಜೊತೆ ಬರುವವನು
ಕನಸಿನಲಿ ಪ್ರೀತಿಯ ಓಲೆ ಬರೆದವನು 
ನನ್ನುಸಿರು ನಿಂತಾಗ ನಿಟ್ಟುಸಿರು ಬಿಟ್ಟವನು 

ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು 

2 ಕಾಮೆಂಟ್‌ಗಳು:

  1. ಹಾಯ್ ಕೀರ್ತಿಅವರೆ,
    ನಿಮ್ಮ ಕವಿತೆ ಮುದ್ದು ಪ್ರೀತಿಯಷ್ಟೆ ಮುದ್ದಾಗಿದೆ.
    ಬಿಡುವಿದ್ದಾಗ ನಿಮ್ಮ ಕವಿತೆಗಳನ್ನು ಓದುವೆ.

    ಪ್ರತ್ಯುತ್ತರಅಳಿಸಿ
  2. ಹಾಯ್ ಕನಸಿನ ರಾಣಿ..
    ನನ್ನ ಬ್ಲಾಗಿಗೆ ಸ್ವಾಗತ..
    ಬೆಳಗಾವಿಯವಳು ಅಂತ ತಿಳಿದು ಖುಷಿಯಾಯಿತು..
    ನಮ್ಮದು ತವರು ಬೆಳಗಾವಿನೆ..:)
    ಖಂಡಿತ ಬಿಡುವಿದ್ದಾಗ ಭೇಟಿ ನೀಡಿ..

    ಪ್ರತ್ಯುತ್ತರಅಳಿಸಿ