ಬಿಳಿ ಬಟ್ಟೆ ಧರಿಸಿ
ತುಟಿಗೆ ಬಣ್ಣ ಬಳಸಿ
ಸದ್ದಿಲ್ಲದೇ ಹೆಜ್ಜೆ ಹಾಕುತ
ಮನದ ದಾರಿಯಲಿ ಸಾಗುತ
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ
ಬೆಳದಿಂಗಳ ಬಾಲೆ
ಮುಡಿದಳು ಮಲ್ಲಿಗೆ ಮಾಲೆ
ಭಾವನೆಗಳ ಕಣ್ಣಿನಲಿ
ಕಾಣಿದಳು ಹೃದಯದ ಗಲ್ಲಿಯಲಿ
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ
ನಗುವನ್ನು ಚೆಲ್ಲುತ
ನನ್ನೆದೆಯ ಗೆಲ್ಲುತ
ಬಯಕೆ ಬಳ್ಳಿ ಬೆಳೆಸಿ
ಪ್ರೀತಿ ಮೊಗ್ಗು ಕಲ್ಪಿಸಿ
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ
ಹೃದಯ ಕದ್ದಳು
ಮನಸ್ಸು ಗೆದ್ದಳು
ಭವ್ಯ ಪ್ರೆಮಲೋಕದಲಿ
ನನ್ನ ಪ್ರೀತಿಯ ದೇಗುಲದಲಿ
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ
ಬೆಳದಿಂಗಳ ಬಾಲೆ
ಪ್ರತ್ಯುತ್ತರಅಳಿಸಿಮುಡಿದಳು ಮಲ್ಲಿಗೆ ಮಾಲೆ
ಭಾವನೆಗಳ ಕಣ್ಣಿನಲಿ
ಕಾಣಿದಳು ಹೃದಯದ ಗಲ್ಲಿಯಲಿ
ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ..its good
Good one :)keep it up:)
nimma pratikriyege tumba dhanyavaadagalu..
ಪ್ರತ್ಯುತ್ತರಅಳಿಸಿ