ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಮಾರ್ಚ್ 16, 2011

ಬೆಳಗಾಂವ ದೇವರು

ಈ ಕವಿತೆಯನ್ನು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಇಟಗಿ ಈರನ್ನನವರು  ಹೇಳಿದ್ದು 
ಬಹು ಸುಂದರ ಕವಿತೆ ರಚಿಸಿ ಎಲ್ಲರ ಮನ ಸೆಳೆದರು .. ಬೆಳಗಾವಿಯಲ್ಲಿ ಎಲ್ಲರ ಮನ ಸೆಳೆದ 
ಈ ಕವಿತೆಯನ್ನು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಇಷ್ಟಪಟ್ಟಿರುವೆ .... 


ನಮ್ಮದು ಬೆಳಗಾಂವ 
ನಿಮ್ಮದು ಬೆಳಗಾಂವ 
ಎಲ್ಲರದೂ ಬೆಳಗಾಂವ 
ಹಗಲೂ ಬೆಳಗಾಂವ
ರಾತ್ರಿ ಬೆಳಗಾಂವ 
ಹಗಲೂ ಬೆಳಗಾಂವ ಸೂರ್ಯ 
ರಾತ್ರಿ ಬೆಳಗಾಂವ ಚಂದ್ರ 
ಬೆಳಗು ಸೂರ್ಯನ್ನು 
ಬೆಳಗು ಚಂದ್ರನ್ನು
ಬೆಳಗಾಂವ ಯಾರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 

ನಮ್ಮ ಒಳಗೆ ಬೆಳಗಾಂವ 
ನಮ್ಮ ಹೊರಗೂ ಬೆಳಗಾಂವ 
ನಮ್ಮ ನಿಮ್ಮ ಒಳ ಹೊರಗೂ ಬೆಳಗಾಂವ 
ನಮ್ಮ ನಿಮ್ಮ ಈ ಬಾಳ ಬೆಳಗಾಂವ
ನಮ್ಮ ನಿಮ್ಮ ಈ ಲೋಕ ಬೆಳಗಾಂವ 
ಬೆಳಗು ಗುಣ ಇರಾಂವ
ಬೆಳಗಾಂವ ನಮ್ಮ ದೇವರು 
ನಾವು ಕೊಡುವವರಲ್ಲಿ
ನಾವು ಬಿಡುವವರಲ್ಲಿ
ನಮ್ಮ ಬೆಳಗಾಂವ 
ನಿಮ್ಮ ಬೆಳಗಾಂವ 
ನಮ್ಮೆಲ್ಲರಿಗೂ ಬೆಳಗಾಂವ 
ನಮ್ಮೆಲ್ಲರಿಗಂತೂ ನಮ್ಮ ಬೆಳಗಾಂವ ದೇವರು 
ಇಂದು ನಾಳೆ ಮುಂದು ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 

ನಮ್ಮ ತ್ರಿಕಾಲ ಪ್ರೀತಿಯ ಸಂಕೇತ 
ವಿಶ್ವ ಕನ್ನಡ ಸಾಹಿತ್ಯದ ಜಾತ್ರೆ 
ಸಂತಸದ ಜಾತ್ರೆ ಈ ತೇರು 
ಬೆಳಗಾಂವ ಯಾವತ್ತು ದೇವರು 
ಅದಕ್ಕಿಲ್ಲಿ ವಿಶ್ವದ ತೇರು 
ಬೆಳಗಾಂವ ನಮ್ಮ ದೇವರು 
ವಿಶ್ವಕ್ಕೆಲ್ಲ ನೀ ಈ ಮಾತು ಸಾರು 
ಬೆಳಗಾಂವ ನಮ್ಮ ದೇವರು 
ಕನ್ನಡ ಬೆಳಗಾಂವ ನಮ್ಮ ದೇವರು 
ಇಲ್ಲೇ ನಮ್ಮ ತೇರು 
ಇಲ್ಲೇ ನಮ್ಮ ಜೋರು 
ಏಕೆಂದರೆ ಬೆಳಗಾಂವ ನಮ್ಮ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 
ಬೆಳಗಾಂವ ದೇವರು 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ