ಮನಮೋಹಿತೆ ಚೆಲುವ
ಚಂದ್ರನ ಅರಗಿಣಿಯೇ
ನಯನಗಳು ಕಂಡ
ನಿನ್ನ ರೂಪವ ವರ್ಣಿಸಲೇ
ನಗುವೆಂದು ಹೇಳುತ
ನಕ್ಕಿದ ಆ ತುಟಿ ಕೆಂಪಾದವೇ
ನಾಚಿಕೆ ಭಾವ ಮೂಡಿ
ಕೆನ್ನೆ ಅರಳಿದ ಗುಲಾಬಿ ಕಂಡಿತೇ
ಹೊಳೆಯುವ ಭಾವಗಳ ಆಗಸದ
ನೀಲಿ ಬಣ್ಣ ಕಣ್ಣಲ್ಲಿ ಮೂಡಿತೇ
ಮೆಲ್ಲನೆಯ ಮನಸ್ಸು ಕದ್ದ
ಹಲ್ಲುಗಳು ಮುತ್ತಾಗಿ ಮಾತಾಡಿತ್ತು
ಸರಳ ರೇಖೆಯ ರಂಗೋಲಿ
ಮೂಗಿನ ಬಂಗಾರದ ಮೂಗುತಿಯು ಹೊಳೆಯಿತೇ
ನಿನ್ನ ಕೈ ಸ್ಪರ್ಶದಲ್ಲಿ
ಹಸಿರು ಬಳೆಗಳು ರಾಗ ಹಾಡಿತೇ
ಮೆದುವಾದ ರೇಷ್ಮೆಯ ಎಳೆಗಳ
ಕಪ್ಪು ಕೂದಲು ಮಲ್ಲಿಗೆ ಮುಡಿಯಿತೇ
ಮೈ ತುಂಬ ಉಟ್ಟ ಬಣ್ಣ
ಚಿಟ್ಟೆಯ ಸೀರೆ ಸೊಂಟದ ಬದಿಗೆ ಸರಿಯಿತೇ
ದಿನದಲ್ಲೂ ಚಂದ್ರ ಭೂಮಿಗೆ
ಬಂದನೆಂದು ರೂಪಸಿಯ ನೋಡಿ ಮನ ಬೆರಗಾಯಿತೇ ...
nice one
ಪ್ರತ್ಯುತ್ತರಅಳಿಸಿthank u manasu
ಪ್ರತ್ಯುತ್ತರಅಳಿಸಿಚೆನ್ನಾಗಿದೆ!!
ಪ್ರತ್ಯುತ್ತರಅಳಿಸಿdhanyavaad puttiy amma..
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಕವನ....
ಪ್ರತ್ಯುತ್ತರಅಳಿಸಿdhanyavaad sir..
ಪ್ರತ್ಯುತ್ತರಅಳಿಸಿ