ಮನದಾಳದಿಂದ ಮಹದಾಸೆಯೊಂದು
ಬೆನ್ನತ್ತಿ ಬಂದಿತು
ಕಗ್ಗತ್ತಲಲ್ಲಿ ಕಿರು ಬೆಳಕನ್ನು
ಹೆಕ್ಕಿ ಹುಡುಕಿತು
ಚಂದ್ರನ ಬೆಳಕಲ್ಲಿ ಮಂದದ
ಇರುಳಲಿ ಪ್ರೀತಿಯ ಕಾದಿತ್ತು
ಮಂದ ವಾಸನೆ ಮೆತ್ತು ಹಾಸಿಗೆ
ಇನಿಯನ ಕರೆದಿತು
ಸುಂದರ ಮೊಗವ ಸವಿಜೇನು ಹನಿಯ
ತಂಪು ತುಟಿಗಳು ಚುಂಬಿಸಿತು
ಕೆಂಪು ಕೆನ್ನೆಗೆ ಹೊಳೆವ ಕಣ್ಣಿಗೆ
ಮುತ್ತಿನ ಮಾಲೆ ಪೋಣಿಸಿತು
ಕಾಲ್ಗೆಜ್ಜೆ ನಾದವ ಕಾಲುಂಗುರ ಬೆರಳ
ಒಬ್ಬಟ್ಟಿನ ಹಾಗೆ ಸುತ್ತಾಡಿತು
ಕಾಣುವ ಸೊಂಟವ ಮೆಲ್ಲಗೆ ಕಚ್ಚಿ
ಮುತ್ತಿಟ್ಟು ಮಲ್ಲಿಗೆ ಮಳೆಯಾಯಿತು
ಉಸಿರು ಹಸಿರಾಗಿ ಮೌನ ಮಾತಾಗಿ
ತುಟಿಯ ಅಂಚು ಪ್ರೀತಿಯ
ಓಲೆ ಬರೆದಿತು...
ಶೃಂಗಾರ ಭಾವದ ಉತ್ತುಂಗದೆಡೆಗೆ.. ಸುಂದರವಾಗಿದೆ
ಪ್ರತ್ಯುತ್ತರಅಳಿಸಿthanks mahesh
ಪ್ರತ್ಯುತ್ತರಅಳಿಸಿbhava tumbida saalugaLu...
ಪ್ರತ್ಯುತ್ತರಅಳಿಸಿ