ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಜನವರಿ 16, 2010

ಸ್ವಲ್ಪ ತಿಳಿ ..

ಪ್ರೀತಿ ಎಂಬ ಪದದಲ್ಲಿ ನೀನು ತುಂಬಿರುವಾಗ

ನಿನ್ನಿಂದ ಹೇಗೆ ದೂರವಿರಲಿ

ಉಸಿರಾಡುವ ಉಸಿರು ನಿನ್ನದಿರುವಾಗ

ನಾನು ನೀನು ಬೇರೆ ಎಂದು ಹೇಗೆ ತಿಳಿಯಲಿ

ನನ್ನ ಹೃದಯ ಮಿಡಿಯುವುದೇ ನಿನಗಾಗಿ

ನಿನ್ನ ನೆನಪಿಲ್ಲದೆ ಹೇಗೆ ಜೀವಿಸಲಿ

ನನ್ನ ಮನಸ್ಸು ನಿನ್ನದಾಗಿರುವಾಗ

ದೇಹವಿಲ್ಲಿದ್ದರೂ ಮನಸ್ಸಿಲ್ಲವೆಂಬುದನ್ನು ಹೇಗೆ ಮರೆಯಲಿ ..

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ