ನನ್ನದೇ ಆದ ಲೋಕವನ್ನು ಸೃಷ್ಟಿಸಿದೆ ನಾನು
ಮನಸ್ಸೆಂಬ ಶಿಲೆಯನ್ನು ಕೆತ್ತಿದೆ ನೀನು
ಭಾವನೆಗಳ ಮನೆಯನ್ನು ಕಟ್ಟಿದೆ ನಾನು
ಸ್ನೇಹವೆಂಬ ಬೀಜವನ್ನು ಬಿತ್ತಿದೆ ನೀನು
ಪ್ರೀತಿಯೆಂದು ತಿಳಿದು ಬೆಳೆಸಿದೆ ನಾನು
ಸಂಬಂಧವನ್ನು ಅರಿಯದೆ ಆಗಲಿದೆ ನೀನು
ನೆನಪಿನ ಮೊಗ್ಗನ್ನು ಬಿಟ್ಟಿರುವೆ ನಾನು
ಸೌಂದರ್ಯದ ಬಲೆಗೆ ಮರಳಿಬಂದೆ ನೀನು
ಸ್ನೀಹದಿಂದ ಪ್ರೀತಿಯ ಹೂವನ್ನು ಅರಳಿಸಿದೆ ನಾನು
ಹಿಂದಿನ ತಪ್ಪಿನ ಶಿಕ್ಷೆಗಾಗಿ ಮುಳ್ಳಾದೆ ನೀನು
ಸ್ನೇಹ ಮರಳಿ ಬೆಳೆಸಿ ಹೂವಾದೆ ನಾನು
ನನ್ನ ಪ್ರೀತಿಯ ಜೀವ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ