ನಿನ್ನಿ ಮೌನ ಸಲ್ಲದು ನನಗೆ
ನಗು ಮಾತು ಸಿಹಿ ಬೆಲ್ಲ ಎನಗೆ
ನಗುವಾಗ ನಕ್ಕು ನಲಿದಿರುವೆ ನೀನು
ಅಳುವಾಗ ಅತ್ತು ಬಳಲಿರುವೆ ನೀನು
ನಿನ್ನ ಮನದಿ ನಗುವು ತುಂಬಿರಲೆಂದು
ನನ್ನ ಮನದ ನಗುವ ನೀಡುವೆ ನಾನಿಂದು
ಮರೆತಿರು ನೀನು ಮರೆಯಾದ ಮನವ
ತಿಳಿದಿರು ನೀನು ತಿಳಿಯಾದ ಅರಿವ
ತಿಳಿಯದೆ ತಪ್ಪಿದ ತಪ್ಪು ಕಲ್ಪನೆಗಳ
ಮರೆತಿರು ನೀನು ಮನಸ್ಸಾರೆಯಿಂದ
ನಕ್ಕು ನಲಿದ ಆ ದಿನಗಳು ನೆನಪಿರಲಿ ನಿನಗೆ
ಅತ್ತು ಕರೆದ ಸಿಹಿ ಕನಸುಗಳು ಬಾರದಿರಲೆಂದೂ
ನನ್ನಿ ಮನ ಮೌನಿಯಾಗಿದೆ
ಮೌನದಲಿ ಮನಸ್ಸು ನಿನ್ನ ಖುಷಿ ಕೇಳಿದೆ
ನಿನ್ನ ಕೊಂಚ ಖುಷಿ ಈ ಗೆಳತಿಗೆ ಸುಂದರ ಕಾಣಿಕೆಯಾಗಿದೆ
How romantic!
ಪ್ರತ್ಯುತ್ತರಅಳಿಸಿ