ಹೆಣ್ಣಿಗೆ ಸ್ವಾತಂತ್ರವೆಲ್ಲಿ ?
ಸ್ವತಂತ್ರತೆ ಇಲ್ಲದ ಬದುಕಿನಲಿ
ಬಣ್ಣವೆಲ್ಲಿ ?
ನಿನ್ನ ಮನಸ್ಸೀಗಾಕಿರುವ
ಬೇಲಿಯ ಕಿತ್ತೆಸೆದು ಬಾ.
ನಿನ್ನ ಭಾವನೆಗಳ ಕಣ್ಣೀರಿಗೆ
ಬೆಲೆಯಿರದು ಈ ಜಗದಲ್ಲಿ
ಸ್ತ್ರೀಶಕ್ತಿ ತೋರಲು ನೋವಿಸುವ
ಭಾವಗಳ ಕಿತ್ತೆಸೆದು ಬಾ .
ಎಲ್ಲಿರುವೆ ನೀನು ಬಚ್ಚಿಕೊಂಡಿರುವೆ
ನಿನ್ನಲ್ಲಿಯೇ ನಿನ್ನನು ಹುಡುಕಾಡುತಿರುವೆ
ಮೌನದಿಂದ ಮನಸ್ಸಿನಡಿ ಬಳಲಬೇಡ .
ನಿಜರೂಪವ ನಿನ್ನಾಕಲೆಯ
ನಿನ್ನ ಜೀವನದ ಮರ್ಮವ
ಹೊರಗೆಳೆದು ತಾ.
ಗಂಡು-ಹೆಣ್ಣು ಮೇಲೂ ಕೀಳಿಲ್ಲ
ಹೆಣ್ಣಿರದೆ ಗಂಡಿಗೆ
ಗಂಡಿರದೆ ಹೆಣ್ಣಿಗೆ
ಒಳ್ಳೆಯ ಸಾಠಿಯಾರಿಲ್ಲ.
ಕೊಂದುಬಿಡು ಹೆದರಿಸುವ ಹೆಬ್ಬಾವನು
ಸುತ್ತಿಕೊ ದೈರ್ಯದಿಂದ ಹೋರಾಡುವ ಹಾವನು
ವಿಷಉಣ್ಣಿಸದಿರು ನೀ ಹೆಮ್ಮೆಯ ಹೆಣ್ಣು
ಸಂರಕ್ಷಿಸು ಹುಟ್ಟುವ ಮುಂಚೆಯೆ ಕಿತ್ತೆಸೆಯುವ ಭ್ರೂಣವನ್ನು .
ಬಾಳಿನಲಿ ಗೌರವದಿಂದಿರು
ದೇವರ ಕಿರೀಟದ ಹಾಗೆ
ಸಂಬಂದದಲಿ ಪ್ರೀತಿ ತುಂಬಿರು
ಕರುಣಾಮಯಿ ನೀನಾಗಿರುವೆ
ಮನ ಮನಗಳ ಜೊತೆ
ಮನೆ ಮನೆ ಬೆಳಗುವ
ಹಣತೆ ನೀನು
ಸಂಸಾರಕೆ ಸೊಬಗು ನೀನು
ಸೌಂದರ್ಯದ ಶಿಲೆ ನೀನು
ಸಂತೋಷಕೆ ಶಿಖರ ನೀನು
ಕ್ಷಮಿಸುವಲ್ಲಿ ಎತ್ತಿದ ಕೈ ನೀನು
ಗುಣದಲ್ಲಿ ಬಂಗಾರ ನೀನು
ಸಂಸ್ಕಾರದಲಿ ಕೀರ್ತಿ ನೀನು
ಗೌರವದಿ ಕಾಣುವ ಮೂರ್ತಿ ನೀನು
ಹೆಣ್ಣೆ - ನೀನು ಹೊಣ್ಣು
ಹೊಳೆಯುತಿರು ಈ ಜಗದಲ್ಲಿ
ತುಕ್ಕ ಹಿಡಿಯದ ಎಲ್ಲ ಗುಣ,ಶಕ್ತಿ ನಿನ್ನಲ್ಲಿದೆ
ನಾರಿ ಶಕ್ತಿಯನ್ನು ನಾಡಿಗೆ ತೋರುಸು
ನಿನ್ನ ಒಳ್ಳೆತನದಿ
ಸ್ತ್ರೀಕುಲದ ಜೊತೆ ಮನುಕುಲವ ಸ್ವರ್ಗವಾಗಿಸು
ಮಹಿಳಾ ದಿನಾಚರಣೆಯ ಶುಭಾಷಯಗಳು
✍🏻 Siddhkirti
ಮಹಿಳಾ ದಿನಾಚರಣೆಯ ಶುಭಾಶಯಗಳು. ಹೆಣ್ಣಿನ ಶಕ್ತಿಯನ್ನು, ಆದರ್ಶಗಳನ್ನು ಚೆನ್ನಾಗಿ ನಿರೂಪಿಸಿರುವಿರಿ.
ಪ್ರತ್ಯುತ್ತರಅಳಿಸಿDhanyavad
ಪ್ರತ್ಯುತ್ತರಅಳಿಸಿ