ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಸೆಪ್ಟೆಂಬರ್ 9, 2016

ನೆನಪಂದ್ರೆ ನನಗಿಷ್ಟ















ನೆನಪು ಬಂದರೆ ನೆನೆವುದು ಮನವು
ಮರೆವುದು ತನು ತನ್ಮಯವನು
ಎದೆಗಪ್ಪಿವೆ ಜೋರಾಗಿ ಕೂಸು ನೆನಪುಗಳು
ಮನಕೆ ಅಂಟಿಕೊಂಡ ಬಿಡಿಸಲಾಗದ ಗಂಟುಗಳು
ನೆನಪಿನಂಗಳದಲ್ಲೊಂದು ಮನವು
ಕವಿದ ಮೋಡ - ಭಾವದ ಸುರಿಸುವುದು ಮಳೆಯು
ನೆನೆದರೆ ಸುಖವು ನೆನಪಾದ ದು:ಖವು
ಕಣ್ಮುಚ್ಚಿ ಕುಳಿತರು ಬಿಡಲಾರದ ನೆಪವು
ಬಣ್ಣಿಸಲಾರದು ನನ್ನ ನೆನಪುಗಳ ಬಣ್ಣವ
ರಂಗಾದ ಮನಸ್ಸುಗಳ ಬಾಂಧವ್ಯ ಪ್ರೀತಿಯ
ಅಪರಿಚಿತ ಬಂಧಕೆ ಪರಿಚಯಿಸಿದ ಸ್ನೇಹವ
ಹೇಗೆಂದು ಮರೆಯಲಿ ನಾ ನನ್ನ ನೆನಪುಗಳ
.ಸವಿ ಸವಿ ನೆನಪುಗಳ
ನೆನಪುಗಳನ್ನು ನೆನಪಿಸಿದರೆ !
ನೆನೆದೆ ನಾನಿಲ್ಲಿ , ಮೊನ್ನೆ - ನಿನ್ನೆಗಳ ನೆನಪಲ್ಲಿ

ನೆನಪಿನ ಕವನ ಗೀಚಿದೆ ನನ್ನ ನೆನಪುಗಳ ನೆಪದಲ್ಲಿ 

2 ಕಾಮೆಂಟ್‌ಗಳು:

  1. ‘ಕೂಸು ನೆನಪುಗಳು’, ಅಹಾ ಎಂತಹ ಸುಂದರ ರೂಪಕ!

    ಪ್ರತ್ಯುತ್ತರಅಳಿಸಿ
  2. ನೆನಪುಗಳ ನೆಪದಲಿ ಮನಸಿದು ಎಷ್ಟು ಸಂತಸವೆಂದು ಸಾಮೀತು ಪಡಿಸಿದ್ರೆ....
    ನನ್ನ ಗೆಳಯನ ನೆನಪಾಯಿತು ಅದೊಂದು ರಸ್ತದಂಗಡಿಯಲ್ಲಿ ಕುಡಿಯುತ್ತಿದ್ದ ಟೀ ನೆನಪು.ಈಗ ಗಲಿಬಿಲಿಪೇಟೆ,ಟ್ರಕ್ಕು,ಬಸ್ಸು,ಲಾರಿ,ಕಾಲೇಜು ಹುಡಗ -ಹುಡುಗಿಯರು..ಇನ್ನೇನೋ ಅಷ್ಟೇಲ್ಲಾ ಗಜಬಿಜಿಯಲಿ ನನ್ನ ಗೆಳಯನ ನೆನ್ಪು ಮಾಡ್ಸೊ ತಾಣ ಅದು.

    ಪ್ರತ್ಯುತ್ತರಅಳಿಸಿ