ಬೇಸಿಗೆಯ ದಿನಗಳಿವು
ಬರಗಾಲದ ಕ್ಷಣಗಳಿವು
ಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು
ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು
ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ
ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ
ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ
ಕೊಳೆ ಬಟ್ಟೆ ತೊಳೆಯಲು ಜಲವೇ ಇಲ್ಲ
ಶಾಂತ ಸಹನೆ ಜನರಿಗಿಲ್ಲ , ಸ್ವಾರ್ಥ ತುಂಬಿದೆಯಲ್ಲ
ಶ್ರಮಿಸುತಿದೆ ಕಾರ್ಯ ನಿರ್ವಹಿಸುತಿದೆ ಸರಕಾರ
ನೀರು ತಯಾರಿಸಲು ರಾಜಕಾರಣಿಗಳಲ್ಲ ಜಾದೂಗಾರ
ಎಲ್ಲರ ಮಿತ ಬಳಕೆಯೆ ಸಮಸ್ಯೆಗಿರುವ ಪರಿಹಾರ
ಹೊಳೆ ರಚಿಸಬೇಕು ನಿಸರ್ಗವೆಂಬ ಕಲೆಗಾರ
ಬಾಯಾರಿಸಿದ ಗದ್ದೆಗಳು
ಒಣಗಿವೆ ಎಮ್ಮೆ- ಎತ್ತುಗಳು
ಕಂಗಾಲಾದ ಬಡವರ ಹೃದಯಗಳು
ಗ್ರಾಮೀಣ ಜನತೆಯ ಹಾಹಾಕಾರ
ಪ್ರತಿಭಟನೆಗೆ ವಿರೋಧ ಪಕ್ಷ ಸಲಹೆಗಾರ
ಸರಕಾರ ತೊಟ್ಟಿರುವುದು ಸಮಸ್ಯೆಯ ಹಾರ
ಭೂತಾಯಿಯ ಕರುಣೆಯಡಿ ಬರಲಿ ಸಂತೈಸಲು ಮಳೆಗಾರ
ವಿಷಮ ಪರಿಸರದ ಚಿತ್ರವನ್ನು ಬಿಡಿಸಿ ನಮ್ಮೆದುರಿಗೆ ಇಟ್ಟಿದ್ದೀರಿ. ಉತ್ತಮ ಕವನಕ್ಕಾಗಿ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿ@ sunath : Tumba dhanyavaad..
ಪ್ರತ್ಯುತ್ತರಅಳಿಸಿ