ನಾನು ನಕ್ಕರೆ
ಅಕ್ಕರೆ ಬರುವುದು
ನಾನು ಅತ್ತರೆ
ಕತ್ತಲೆ ಹರಡುವುದು
ನಾನು ಖುಷಿಯಾದರೆ
ಮಳೆ ಸುರಿಯುವುದು
ನಾನು ದು:ಖಿಸಿದರೆ
ಭೂಮಿ ಬರಡಾಗುವುದು
ನಾನು ಕೋಪಗೊಂಡರೆ
ಜ್ವಾಲಾಮುಖಿ ಏಳುವುದು
ನಾನು ಸುಮ್ಮನಿದ್ದರೆ
ಸುಂದರತೆ ಹೆಚ್ಚುವುದು
ನಾನು ಪ್ರೀತಿಸಿದರೆ
ಬೆಳದಿಂಗಳ ರಾತ್ರಿಯಾಗುವುದು
ನಾನು ದ್ವೇಷಿಸಿದರೆ
ಸಿಡಿಲು ಗುಡುಗು ಕೇಳುವುದು
ನಾನು ಮೌನಿಯಾದರೆ
ಪ್ರೇಮಿಗಳ ಮಿಲನವಾಗುವುದು
ನಾನು ಯಾರು! ನಾನು ಯಾರು!
ನಾನು ನಿಸರ್ಗ
ನಿಸರ್ಗ ಖುಷಿ ಪಡಲು, ನಗಲು, ಅಳಲು, ಸಿಟ್ಟು ಮಾಡಲು,. . . , ಎಲ್ಲಕ್ಕೂ 'ಅವನ' ನಿರ್ದೇಶನವಿರಬೇಕು, ನಿಸರ್ಗ ತನ್ನಿಂದ ತಾನೇ ಏನೂ ಮಾಡಲಾರದು ಅಲ್ಲವೆ, ಕೀರ್ತಿಯವರೇ.
ಪ್ರತ್ಯುತ್ತರಅಳಿಸಿ