ಅಮ್ಮ ಎಂದು ಕರೆಯುವರಿಲ್ಲ
ಅಪ್ಪನೆಂದು ಪ್ರೀತಿಸುವರಿಲ್ಲ
ಮಮತೆಯ ಭಾವದ ಅರಿವಿಲ್ಲ
ಸಂಬಂಧ ಮೌಲ್ಯದ ಬೆಲೆಯಿಲ್ಲ
ಆದರೂ ಬೇಕು ಗಂಡು ಮಗ
ಅಜ್ಞಾನಿಗಳಿಗೆ ಇವನ ಬೆಲೆಯೇ ನಗ
ಅಕ್ಕರೆ ಮಾತು ಆಡುವುದಿಲ್ಲ
ನಕ್ಕರೆ ನಗಲು ಬಿಡುವುದಿಲ್ಲ
ಸಂತೆಯಲಿ ಮಾನವನ್ನು ಮಾರುವರೆಲ್ಲ
ಹಿರಿಯರನ್ನು ಹೊಡೆಯುವರಲ್ಲ
ಆದರೂ ಬೇಕು ಗಂಡು ಮಗ
ಅಜ್ಞಾನಿಗಳಿಗೆ ಇವನ ಬೆಲೆಯೇ ನಗ
ದೀಪ ಬೆಳಗಿಸಲೆಂದು ಹುಟ್ಟಿದವರಲ್ಲ
ಕೀರ್ತಿ ಹಬ್ಬಲೆಂದು ದುಡಿದವರಲ್ಲ
ಅಮ್ಮ-ಅಪ್ಪನಿಗೆ ಶತ್ರು ಅನ್ನುವರಲ್ಲ
ತುತ್ತು ನೀಡಿದ ತಾಯಿಯ ಕತ್ತು ಕೊಯ್ಯುವರಲ್ಲ
ಆದರೂ ಬೇಕು ಗಂಡು ಮಗ
ಕೆಲವರಿಗೆ ಮಗನೇ ಬಂಗಾರದ ನಗ
ಹಾಲುನಿಸಿದ ತಾಯಿಯ ಸ್ಮರಿಸುವರಿಲ್ಲ
ಕೈ ಹಿಡಿದು ನಡಿಸಿದ ಅಪ್ಪನ ಅರಿವಿಲ್ಲ
ಕೆಟ್ಟವರ ಜೊತೆ ಸೇರಿ ಕೆಡುವರೆಲ್ಲ
ವೃದ್ಧಾಶ್ರಮದ ದಾರಿ ಹೆತ್ತವರಿಗೆ ತೋರಿಸುವರಲ್ಲ
ಆದರೂ ಬೇಕು ಗಂಡು ಮಗ
ಗಂಡು ಮಗನೆಂದರೆ ಚಿನ್ನದ ಮಗ
ಮಡದಿಯ ಮದ್ದಿಗೆ ನಶೆಯಾಗುವರಲ್ಲ
ಹೆತ್ತವರ ಕಳ್ಳಿಗೆ ಬೆಂಕಿ ಇಡುವರಲ್ಲ
ಹಿರಿಯರ ಸೇವೆ ತಿಳಿದಿಲ್ಲ
ಸ್ವಾರ್ಥದಲಿ ಹೆತ್ತವರನು ಸಂಹರಿಸುವರಲ್ಲ
ಆದರೂ ಬೇಕು ಗಂಡು ಮಗ
ಮನೆ ಬೆಳಗಿಸಲು ಗಂಡು ಮಗ
ಮರೆಯದಿರಿ ದೀಪ ಹಚ್ಚುವಳು ಹೆಣ್ಣು
ಬೆಳಕು ನೀಡುವಳು ಹೆಣ್ಣು
ಆ ಬೆಳಕಿನಲಿ ಮಿಂಚುವನು ಮಾತ್ರ ಗಂಡು
ಈ ಕುರುಡ ಲೋಕಕೆ ಕಾಣುವುದು
ದೀಪವೆಂಬ ಉರಿಯುವ ಹೆಣ್ಣಲ್ಲ
ಮಿಂಚಾಗಿ ಮಾಯವಾಗುವ ಗಂಡುಮೃಗವೆಂಬ " ಮಗ "
ಕೀರ್ತಿ,
ಪ್ರತ್ಯುತ್ತರಅಳಿಸಿಭಾರತೀಯರ ಮೂರ್ಖ ಮನೋಭಾವನೆಯನ್ನು ನಿಮ್ಮ ಕವನದಲ್ಲಿ ಸರಿಯಾಗಿ ಹೇಳಿದ್ದೀರಿ. ಆದರೆ ಕಾಲ ಬದಲಾಗುತ್ತಿದೆ. ವಿದ್ಯಾವಂತರಲ್ಲಾದರೂ ಈ ಭಾವನೆ ಕಡಿಮೆಯಾಗುತ್ತಿದೆ ಎಂದು ತೋರುತ್ತಿದೆ.
Yatta hodiri bareyuvuda bittu... nammurina barahagarti kaaneyagiddare huduki kottavarige 1 lekhana....
ಪ್ರತ್ಯುತ್ತರಅಳಿಸಿ