ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಮೇ 4, 2011

ಕವಿಮನ




ನಿರ್ಜೀವ ಕಲ್ಲಿನಲಿ
ಶಿಲಾಬಾಲೆಯ ಜೀವ ತುಂಬಿ 
ಸೌಂದರ್ಯದ ಕಣ್ಮಣಿ ಎಂಬ 
ಹೆಸರಿಟ್ಟವನೇ  ಕವಿ 

ನೀಲಿ ಆಗಸದಲಿ 
ಭಾವನೆಗಳ ಮೋಡ ಬಿತ್ತಿ 
ಖುಷಿಯ ಮುಂಗಾರು 
ಮಳೆ ಸುರಿಸುವವನೆ ಕವಿ 

ಗುಲಾಬಿ ಹೂವಿನಲಿ 
ಪ್ರೇಯಸಿಯ ಮುಖ ಬಿಡಿಸಿ 
ಭ್ರಮರವಾಗಿ ಮಕರಂದ 
ಹೀರುವವನೆ ಕವಿ 

ಇಬ್ಬನಿಯ ಹನಿಯಲಿ 
ವಜ್ರಗಳ ಹಾರ ಪೋಣಿಸಿ 
ಎಳೆಗಳ ಕೊರಳಿಗೆ 
ಹಾರ ಹಾಕುವವನೆ ಕವಿ 

ತುಂತುರು ಮಳೆಯಲಿ 
ಮುತ್ತಿನ ಮಳೆ ಸುರಿಸಿ 
ಪ್ರುಕ್ರತಿಯ ಸ್ನೇಹಿತಿಗೆ 
ನಕ್ಕು ನಲಿಸುವವನೆ ಕವಿ 

ರೈತರ ಬೆವರಿನಲಿ 
ಸುಖ-ದು:ಖಗಳನ್ನು ಬೆರೆಸಿ 
ಗಂಜಿಗೆ ಅಮೃತವೆಂದು 
ಹೆಸರಿಡುವವನೆ ಕವಿ 

ನೋಟಿನ ಅಹಮಿನಲಿ 
ಬಾಳುವ ಧಣಿಗಳ ಮನ 
ಕಲ್ಲು ಬಂಡೆಗೆ 
ಹೋಲಿಸುವವನೆ ಕವಿ 

ಮುಸ್ಸಂಜೆ ತಂಗಾಳಿಯಲಿ 
ಎಲೆಗಳ ಮಿಲನವಾಗಿಸಿ
ಮೊಗ್ಗಿಗೆ ಜೀವ 
ತುಂಬುವವನೆ ಕವಿ 

ಬೇಸಿಗೆಯ ಬಿಸಿಲಿನಲ್ಲಿ 
ಸೂರ್ಯನ ಕೋಪಕೆ ಬೆಂದು 
ಮುದುಡುವ ಹೂವಿಗೆ ಮಳೆ 
ಹನಿಯಾಗಿ ಮುದ್ದಿಸುವವನೆ ಕವಿ 

ದು:ಖಿಸುವ ಕಣ್ಣೀರಿನಲಿ 
ನೆನೆದ ರೆಪ್ಪೆಗಳಿಗೆ 
ಹೊಸ ಕನಸುಗಳನ್ನು 
ಕೊಡುವವನೇ ಕವಿ 

ಮೌನವಾದ ಮನಸಿನಲಿ 
ಪ್ರೀತಿಯ ಬೀಜ ಬಿತ್ತಿ 
ಪ್ರೇಮಲೋಕದ ಸುಖವ 
ಸ್ವರ್ಗವನ್ನಾಗಿಸುವವನೆ ಕವಿ 

ಪುಸ್ತಕದ ಪುಟದಲಿ 
ಪೆನ್ನಿಗೆ ರಾಜಪಟ್ಟ ಕೊಡಿಸಿ 
ಪ್ರಾಸ ಪದಗಳ ಮದುವೆ
ಮಾಡಿಸುವವನೆ ಕವಿ 

ಚಂದಿರನ ರಾತ್ರಿಯಲಿ 
ನೆಲಕೆ ಹೂಹಾಸಿ ಸುಖದ 
ಕನಸಿನಲಿ ದಿಂಬನ್ನು ಇನಿಯನೆಂದು 
ಅಪ್ಪಿಕೊಳ್ಳುವವನೆ ಕವಿ 

ಮುದ್ದು ಮಕ್ಕಳಲಿ 
ಹೊಳೆಯುವ ನಕ್ಷತ್ರ ಕಂಡು 
ಚಂದ್ರಮನ ಜೊತೆಯಲಿ 
ಆಟವಾಡಿಸುವವನೆ ಕವಿ 

ಹಾರುವ ಹಕ್ಕಿಗಳಲಿ 
ಆಕಾಶ ಮುಟ್ಟಿದ ಸಾಹಸ ತುಂಬಿ 
ಹಾಡು ಹಾಡುತಿವೆಂದು 
ಹೊಗಳುವವನೆ ಕವಿ 

ಕನಸಿನ ಕಲ್ಪನೆಯಲಿ 
ಬವಣೆಗಳ ಸುನಾಮಿ  ಎಬ್ಬಿಸಿ 
ವಾಸ್ತವದಲಿ ಕಾಲ್ಪನಿಕತೆ 
ಹುಡುಕುವವನೆ ಕವಿ 

ಅಮವಾಸ್ಯೆಯಲಿ 
ಚಂದ್ರಮನ ತೋರಿಸಿ 
ಬೇಸಗಿಯಲಿ  ತಂಗಾಳಿಗೆ 
ಆಮಂತ್ರಿಸುವವನೆ  ಕವಿ 

ಪ್ರೇಯಸಿಯ ಮೌನದಲಿ  
ಹೃದಯದ ಮಾತು ಕೇಳಿಸಿ 
ಉಸಿರು ನಿಂತರು ಪ್ರೀತಿಯನು 
ನೆನಪಿಸುವವನೆ ಕವಿ .. 


16 ಕಾಮೆಂಟ್‌ಗಳು:

  1. ಭಾವನೆಗಳ್ಳನ್ನು ಅನುಭವಕ್ಕೆ ತಂದು
    ಅನುಭವವನ್ನು ಹಾಳೆಗಳಲ್ಲಿ ಬರೆಯುವವನೇ ಕವಿ .......
    ಸೂಪರ್ ನಿಮ್ಮ ಕವನ, ಅದರ ನಿರ್ಮಾಣ .....

    ಪ್ರತ್ಯುತ್ತರಅಳಿಸಿ
  2. ಕೀರ್ತಿ ಏನ್ರೀ ಇದು ಇಷ್ಟೆಲ್ಲಾನಾ? ಕವಿ ಅಂದ್ರೆ..?? ಅಬ್ಬಬ್ಬಾ..ಪ್ರತಿ ಹೋಲಿಕೆ ಉಪಮೆ ವಿಶಿಷ್ಟ...ಪ್ರತ್ಯೇಕ ...ಮತ್ತು ಸಾಲುಗಳು ಸರಳ ಆದ್ರೆ ಗಾಢಾರ್ಥಗರ್ಭಿತ...ಏಲ್ಲಾ ಓಕೆ...ಆದರೆ ನನಗೆ ತುಂಬಾನೇ ಓಕೆ ಅನಿಸಿದ್ದು...
    ಈ ಸಾಲುಗಳು.....ವಾವ್
    ಗುಲಾಬಿ ಹೂವಿನಲಿ
    ಪ್ರೇಯಸಿಯ ಮುಖ ಬಿಡಿಸಿ
    ಭ್ರಮರವಾಗಿ ಮಕರಂದ
    ಹೀರುವವನೆ ಕವಿ

    ಪ್ರತ್ಯುತ್ತರಅಳಿಸಿ
  3. ನಿಮ್ಮ ಪ್ರತಿಕ್ರಿಯೆಗೆ ನಾನು ತುಂಬ ಆಭಾರಿ
    ನೀವು ಅಂದರೆ ಮಹಾ ಕವಿಗಳೆಂದರೆ ಹೀಗೆ ಅಲ್ಲವೆ ಅದಕ್ಕೆ
    ಈ ಕವನ ದೊಡ್ಡದಾಗಿದೆ ..
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  4. ಕೀರ್ತಿ..ಮಹೇಶ್ ಚುಟುಕಗಳಲ್ಲಿ ಚುಟುಕು ಮುಟ್ಟಿಸ್ತಾರೆ...ನಾವು ಉದ್ದಕ್ಕೆ ಹೇಳ್ತಾಹೋಗಿ...ತುಸ್ ಆಗ್ತೀವಿ....ಹಹಹಹ

    ಪ್ರತ್ಯುತ್ತರಅಳಿಸಿ
  5. ಅವರು ನಮ್ಮಕಿಂತ ಜಾಣರು ಕನ್ರಿ
    ಸ್ವಲ್ಪದರಲ್ಲಿಯೇ ಎಲ್ಲ ಹೇಳ್ತಾರೆ ಮತ್ತು ಸ್ವಲ್ಪಾನೆ ತಲೆ ತಿಂತಾರೆ .. :)

    ಪ್ರತ್ಯುತ್ತರಅಳಿಸಿ
  6. ನಿಮ್ಮ ತಾಣಕ್ಕೆ ಮೊದಲ ಭೇಟಿ. ಸು೦ದರವಾಗಿದೆ. ಕವಿ-ವಿಶ್ಲೇಷಣೆ ಸೊಗಸಾಗಿದೆ. ಅಭಿನ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  7. ಬಹಳ ಸುಂದರವಾದ ಸೊಗಸಾದ ಕವನ ಕೀರ್ತಿ :) :) ಬಹಳ ಚೆನ್ನಾಗಿ ಬರಿಯುತ್ತೀರಿ ನೀವು :) :) ನನ್ನ ಬ್ಲಾಗ್ ಭೇಟಿ ಮಾಡಿರುವುದಕ್ಕೆ ಬಹಳ ಧನ್ಯವಾದಗಳು. ನಿಮ್ಮ ಉತ್ತೆಜಕರವಾದ ಬರಹವನ್ನು ಓದಿ ನನಗೆ ತುಂಬ ಉಲ್ಲಾಸವಾಯಿತು. ನಿಮಗೆ ಹೃದಯಪೂರ್ವಕ ವಂದನೆಗಳು :) :)

    ಪ್ರತ್ಯುತ್ತರಅಳಿಸಿ
  8. creativity 1st i wnt to tel u is i liked ur name creativity so much..
    coz i feel my mind is very creative.. n i like creativity..
    i feelu wrote moregood words for my poems. thank u so much for comment n visitng my blog also..keep in touch with my poems it may help ur comments to my poems k.

    ಪ್ರತ್ಯುತ್ತರಅಳಿಸಿ