ಹಿಂದೂ - ಮುಸ್ಲಿಂ ನ್ಯಾಯದ ಕಿಚ್ಚು
ಜಾತಿಯ ದ್ವೇಷ, ಜನರ ಹುಚ್ಚು
ಹತ್ತಿದ ಬೆಂಕಿಯು ಆರುವ ಹೊತ್ತು
ನ್ಯಾಯಕ್ಕೆ ಬೆಲೆ ವರ್ಷ ಅರವತ್ತು
ರಾಮ-ರಹೀಮರು ಎಂದೂ ಒಂದೇ
ಹೇಳಿದರು ನ್ಯಾಯಾಧೀಶರೂ ಇಂದೇ
ದ್ವೇಷವ ಅಳಿಸಿ ಶಾಂತಿಯ ಉಳಿಸಿ
ದೇಶದಲ್ಲೆಡೆ ಐಕ್ಯತೆ ಬೆಳೆಸಿ
ನ್ಯಾಯಾಧೀಶರ ಜಾಣದ ಕಲೆಯಿದು
ಸಮಾನತೆಯ ಜಾತಿಗೆ ಬೆಲೆಯಿದು
ಭಗವದ್ಗೀತೆಯ ಪ್ರಮಾಣ ಪ್ರತಿ ಇದು
ದೇಶದ ಹಿತಕೆ ಒಳ್ಳೆಯ ಫಲವಿದು
ಹಿಂಸೆಯ ನೆರಳು ಬೀಳದೆ ಇರಲಿ
ಶಾಂತಿಯ ಮನೆಯು ಮುರಿಯದಿರಲಿ
ಧಾರ್ಮಿಕ ಸಹಿಷ್ಣುತೆಯ ದೇಶವಿದು
ಶ್ರೀಮಂತ ಸಂಸ್ಕೃತಿಯ ಬಳ್ಳಿಯಿದು
ಭಾವನೆಗಳ ಮಿಡಿತವೆ ತುಂಬಿದ ಮಣ್ಣಿದು
ಸತ್ಯ ಮೇವ ಜಯತೆ ಸಾರಿದ ನಾಡಿದು
ಮಣ್ಣಿನ ಮಕ್ಕಳ ಮನದಂಗಳವಿದು
ಭಾರತ ಮಾತೆಯ ಹೆಮ್ಮೆಯ ದೇಶವಿದು
ನನ್ನ ದೇಶ ಭಾರತ :)
tumba chennagide kavana ....
ಪ್ರತ್ಯುತ್ತರಅಳಿಸಿthank u
ಪ್ರತ್ಯುತ್ತರಅಳಿಸಿ