ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಏಪ್ರಿಲ್ 20, 2012

ಬರುವೆಯಾ ನೀನಿಂದು ??

ಬಿಸಿಲು ಬೇನೆಯಲಿ
ನಿನ್ನ ನೆನಪಿಸುತ
ಅರಳಿದ ಗುಲಾಬಿ ನಾನಿರುವೆ
ಕಂಡರು ನೀ ದೂರದಲಿ
ನನ್ನ ನೆನೆಸುತ
ಮೋಡದಾಚೆ ಮರೆಯಾಗಿರುವೆ
ದಿನ ಕಳೆದು ಹೋದರೂ
ಕಾಣದ ನೀನು
ಮುನಿಸು ಬಂದರು ಮರೆತಿರುವೆ
ಬರುವ ದಾರಿಯಲಿ
ಭಾವನೆಯ ಸರ ಹಿಡಿದು
ಸನ್ಮಾನಕೆ ನಾ ನಿಂತಿರುವೆ
ಬಂದರೆ ನೀನು
ಸಂತಸದ ಹೊನಲು
ಈ ಭೂಮಿ ತಾಯಿಗೆ...

ಗುರುವಾರ, ಏಪ್ರಿಲ್ 19, 2012

* ಬೆಳಗುವ ದೀಪ *








ಬೆಳಗುವಾ ಬೆಳಗುವಾ 
ಬೆಳಗುವ ದೀಪ


ಕಿತ್ತೆಸೆವ ಕೊಳೆಯ
ಕೆತ್ತಿಸುವ ಕಲೆಯ
ಸಂಸ್ಕ್ರತಿಯ ದೀಪ ಬೆಳಗುವಾ
ಬೆಳೆಸುವ ಪ್ರೀತಿಯ
ಸೆಳೆಯುವ ಸತ್ಯವ
ಸಂಬಂಧದ ದೀಪ ಬೆಳಗುವಾ
ಕರುನಾಡು ಕಳೆಯ
ಕವಿಬನದ ಮನವ
ಸಾಹಿತ್ಯ ದೀಪ ಬೆಳಗುವಾ
ಜಯಿಸುವ ಶಾಂತಿಯ 
ಅಳಿಸುವ ಅಹಿಂಸೆಯ
ದಿವ್ಯ ಭಾವನೆಯ ದೀಪ ಬೆಳಗುವಾ
ಜಾತಿಗಳು ಒಂದಾಗುವ
ತನು-ಮನ ಚಿಗುರೊಡೆಯುವ
ಜಗವೆಲ್ಲ ಸಂತಸದ ದೀಪ ಬೆಳಗುವಾ



ಬೆಳಗುವಾ ಬೆಳಗುವಾ 
ಬೆಳಗುವ ದೀಪ