ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ನವೆಂಬರ್ 23, 2009

ಜೀವಾಳ ಸಂಗಾತಿ


ಮನಸ್ಸೆಂಬ ತೋಟದಲ್ಲಿ ಹೂ ಆಗಿ

ಅರಳಿದೆ ನೀನು

ಮೋಡವಾದ ಪ್ರೀತಿಯನ್ನು ಕರಗಿಸಿ

ಮಳೆ ಹನಿಯಾದೆ ನೀನು

ಎಲೆಯಾಗಿ ನಾನು ಬೆಳೆದರೆ

ಹಸಿರು ಬಣ್ಣ ನೀಡಿದೆ ನೀನು

ಹನಿಯಾಗಿರುವ ನನಗೆ

ಮುತ್ತಾಗಿ ಬದಲಾಯಿಸಿದೆ ನೀನು

ಬಡಿಗ ಕೆತ್ತಿದ ವೀಣೆ ನಾನು

ಇಂಪಾಗಿ ಕೇಳುವ ನಾದ ನೀನು

ಕಲ್ಲು ಮಣ್ಣಾಗಿದ್ದ ನನಗೆ

ಶಿಲೆಯಾಗಿ ಕೆತ್ತಿದ ಶಿಲ್ಪಿ ನೀನು

ದುಂಬಿಯಾಗಿ ನಾನು ಬಂದರೆ

ಸಿಹಿಯನ್ನು ನೀಡುವ ಹೂ ನೀನು

ದೇವರು ಸೃಷ್ಟಿಸಿದ ದೇಹ ನಾನು

ಅದರಲ್ಲಿರುವ ಜೀವ ನೀನು ಹಾಗೆ

ಪ್ರೀತಿ ತೋರಿಸಿದೆ ನೀನು

ಹೀಗೆ ಹೂ ಆಗಿ ಅರಳಿ ಬಂದ

ನನ್ನ ಮನಸ್ಸೆಂಬ ಸೌಂದರ್ಯಕ್ಕೆ

ಕೀರ್ತಿ ತಂದು ಕೊಟ್ಟ

ನನ್ನ ಜೀವಾಳ ಸಂಗಾತಿ ನೀನು..


ನನ್ನ ಪ್ರೀತಿಯ ಜೀವ :)

5 ಕಾಮೆಂಟ್‌ಗಳು:

  1. ನನಗೆ ಮರಾಠಿ ಬರೊಲ್ಲ. ಹಾಗಾಗಿ ಕನ್ನಡ ಕವಿತೆಗೆ ಉತ್ತರಿಸುತ್ತಿದ್ದೇನೆ :)

    ಮೊದಲಿಗೆ ನಿಮ್ಮ ಮೆಚ್ಚುಗೆಗೆ ಬಹು ಧನ್ಯವಾದಗಳು. ನಿಮಮ್ ಅಂತರಾಳದ ಪ್ರೇಮವನ್ನು, ಸುಂದರ ಭಾವಗಳನ್ನು ಈ ಕವಿತಯ ಮೂಲಕ ನಿಮ್ಮ ಜೀವಕ್ಕೆ ಕಾಣಿಸಿದ್ದೀರಿ :) ಬರವಣಿಗೆಯ ಉತ್ಸಾಹ ಕುಂದದಿರಲಿ. ಆದಷ್ಟು ಉತ್ತಮ ಕವಿತೆ/ಕಥೆ/ಕಾದಂಬರಿಗಳನ್ನು ಓದಿ ಶಬ್ದ ಬಂಢಾರ, ವಾಕ್ಯ ರಚನೆಗಳನ್ನು ಗಮನಿಸಿ. ಇದು ನಿಮ್ಮ ಬರಹಕ್ಕೆ ಅನುಕೂಲವಾಗುತ್ತದೆ.

    "ಹನಿಯಾಗಿರುವ ನನಗೆ
    ಮುತ್ತಾಗಿ ಬದಲಾಯಿಸಿದೆ ನೀನು.."


    ಇಲ್ಲಿ

    ಹನಿಯಾಗಿರುವ ನನ್ನ..
    ಮುತ್ತಾಗಿ ಬದಲಿಸಿದೆ ನೀನು - ಎಂದಾದರೆ ವ್ಯಾಕರಣ ಮತ್ತೂ ಸ್ಪಷ್ಟವಾಗುವುದು.

    "ನನಗೆ" ಎನ್ನುವ ಪದ ಹೊಂದಿಕೆ ಆಗುವುದಿಲ್ಲ.
    Good Poem. Keep it up. ಹೀಗೇ ಬರೆಯುತ್ತಿರಿ. ಆದಾಗಲೆಲ್ಲ ಖಂಡಿತ ಭೇಟಿ ನೀಡುತ್ತಿರುತ್ತೇನೆ. ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  2. Good evening Kirti Mam, istu dina adru nanage nimma profile nodoke agidilla adre evattu nodide, neevu tumba chennagi kavana bareetiri anta nange ivatte gottagiddi kanri. Yene aagali nimma e kale heege munduvariyili. Hao, nimgond vishaya helbeku, bahushaha gottirabahudu my friend kooda college life nalli kavana baredu bachchalalli jari biddidru!!!! Keli nodi!! Aadru kaviyagabekendidda nanna geleyanige KAVAYITRI balasangaatiyagi sikkiddu tumba santosh. I wish u good luck for ur future writings. Bye!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೀವು ಹೇಳಿದ ಹಾಗೆ ನಿಮ್ಮ ಗೆಳೆಯ ಬರೆದ ಕವನ ಓದಿ ನಾನು ಅವರಲ್ಲಿ ಜಾರಿ ಬಿದ್ದೆ.. ಧನ್ಯವಾದ..

      ಅಳಿಸಿ